loader

Department of Kannada

Staff Image

Dr. Venkatesh

M.A., Ph.D. HOD

"ಸಾಹಿತ್ಯವೆನ್ನುವುದು ಭಾಷೆಯ ಮೂಲಕ ಹೊಮ್ಮಿದ ಜೀವನದ ಅಭಿವ್ಯಕ್ತಿ " - ಹಡ್ಸನ್

"ನಮ್ಮ ಭಾಷೆಯನ್ನು ಅಭಿಮಾನದಿಂದ, ಪ್ರೀತಿಯಿಂದ ಕಾಣುವ ಮನಸ್ಸು ನಮ್ಮದಾಗಲಿ. ಅದನ್ನು ಮರೆತು ಕೀಳರಿಮೆ ಬೆಳೆಸಿಕೊಂಡು ನಮ್ಮ ಭಾಷೆಯನ್ನು ನಾವೇ ಮರೆತರೆ ಅದು ತಾಯಿಯನ್ನೇ ಮರೆತಂತೆ ಆಗುತ್ತದೆ".

ಕನ್ನಡ ವಿಭಾಗವು ನುರಿತ ಅಧ್ಯಾಪಕರನ್ನು ಒಳಗೊಂಡಿದೆ. ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆ ಜೊತೆಗೆ ಭಾಷೆಕಲಿಕೆ, ಬೌದ್ಧಿಕ ವಿಕಸನದೊಂದಿಗೆ, ಜೀವನ ಮೌಲ್ಯಗಳನ್ನು ಸಾಮಾಜಿಕ ಹೊಣೆಗಾರಿಕೆಗಳನ್ನು, ಶಿಸ್ತು ಹಾಗೂ ಸ್ವಾವಲಂಬಿ ಜೀವನ ಹೋರಾಟಗಳನ್ನು ಉದಾಹರಿಸುತ್ತಾ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಮೈಗೂಡಿಸಿಕೊಂಡು ಸಾಗಲು ಸದಾ ಸಹಕಾರವನ್ನು ನೀಡುತ್ತಾಬರುತ್ತಿದೆ.

ಭಾಷಾಗ್ರಹಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಉಪನ್ಯಾಸಕರು ಮಾಧ್ಯಮಗಳನ್ನು ಬಳಸಿ ಹೇಳುವುದು, ಪರಿಕರಗಳನ್ನು ತೋರಿಸಿ ಹೇಳುವುದು, ನಾಟಕ, ಹಾಡುಗಾರಿಕೆ, ಕರಕುಶಲ ಕೌಶಲ್ಯ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಸಾಮರ್ಥ್ಯಗಳನ್ನು ಹೊರತರುವಲ್ಲಿ ಪ್ರಯತ್ನಶೀಲರಾಗಿದ್ದಾರೆ.

"ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ಜಲವೆಂದರೆ ಬರಿ ನೀರಲ್ಲ ಅದು ಪಾವನ ತೀರ್ಥ. ಕನ್ನಡವೆಂದರೆ ಜನಜಂಗುಳಿಯಲ್ಲ ಜೀವನ ಶೈಲಿ ವಿಧಾನ. ವಾಯುವೆಂದರೆ ಬರಿ ಹವೆಯೇ ಅಲ್ಲ ಉಸಿರದು ಪಂಚಪ್ರಾಣ" -ನಿಸಾರ್ ಅಹಮದ್

  • Staff Image

    Dr. Vasanthi S

    M.A., Ph.D Lecturer
  • Staff Image

    Mr. Shantha Kumar M

    M.A., B.Ed. Lecturer
  • Staff Image

    Mr. Thippeswamy N

    M.A., M.Phil Lecturer